ಇತ್ತೀಚಿನ ವರ್ಷಗಳಲ್ಲಿ ಮನೆ ಮತ್ತು ಆಫೀಸಿನಂಥ ಜಾಗಗಳಲ್ಲಿ, ಗೋಡೆ ಮತ್ತು ಮೇಲ್ಛಾವಣಿಗೆ, ಬಿಳೀ ಬಣ್ಣ ಬಳಿದು ಸೆಖೆಯನ್ನು ತಡೆಗಟ್ಟುವ ವಿಧಾನ ಹೆಚ್ಚು ಪ್ರಚಾರಗೊಳ್ಳುತ್ತಿದೆ. ಬಿಳೀ ಬಣ್ಣವು ಸೂರ್ಯನ ಬಿಸಿಲನ್ನು ಹೆಚ್ಚು ಪ್ರತಿಫಲಿಸುವುದರ ಜೊತೆಗೆ, ಶಾಖವನ್ನೂ ಹೀರಿಕೊಳ್ಳುತ್ತದೆ. ಹಾಗಾಗಿ ಇದು ಪರಿಸರಸ್ನೇಹಿಯಾಗಿದ್ದೂ ಕೂಡ, ಕಡಿಮೆ ಖರ್ಚಿನಲ್ಲಿ ಮುಗಿಸಬಹುದಾದ ಪರಿಹಾರವೆಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಈ ವಿಧಾನವನ್ನು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೇ ಶಾಖ ನಿರೋಧಕ ವಸ್ತುಗಳ ಜೊತೆ ಹೋಲಿಸಿದರೆ, ಬೇರೆಯದೇ ಚಿತ್ರ ಹೊರಬೀಳುತ್ತದೆ. ಬಿಳೀ ಬಣ್ಣ ಬಳಿದು ದುಡ್ಡು ಉಳಿಸಿದೆವು ಎಂದು ಶುರುವಿನಲ್ಲಿ ಅನಿಸಿದರೂ ಕೂಡ, ಆ ಖುಷಿ ಎಷ್ಟು ದಿನ ಉಳಿಯುತ್ತದೆ ಎನ್ನುವುದು ಇಲ್ಲಿ ಚರ್ಚೆಯ ವಿಷಯ. ಏಕೆಂದರೆ ಮಳೆ, ಧೂಳು, ಮಾಲಿನ್ಯ ಮತ್ತು ಗಾಳಿಯ ಹೊಡೆತಕ್ಕೆ ಸೆವೆಯುವ ಬಿಳೀ ಬಣ್ಣ ಕಾಲಕ್ರಮೇಣ ಮಂಕಾಗುತ್ತದೆ. ಬಣ್ಣ ಮಂಕಾಯಿತೆಂದು ಪದೇ ಪದೇ ಮನೆಗೆ ಬಿಳೀ ಬಣ್ಣ ಬಳಿಯುತ್ತಿರಲು ಸಾಧ್ಯವೇ? ಒಮ್ಮೆ ನಿರ್ಮಿಸಿದ ಮೇಲೆ ಮತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವಂಥ (fix and forget) ವಿಧಾನಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಬಿಳೀ ಬಣ್ಣಕ್ಕೆ ಹೋಲಿಸಿದರೆ ಅವುಗಳ ಬಾಳಿಕೆ ಮತ್ತು ಪರಿಣಾಮ ಹೇಗೆ ಎನ್ನುವುದನ್ನು ನೋಡೋಣ.
ಬಿಳೀ ಬಣ್ಣ ಮತ್ತು ಶಾಖ ನಿರೋಧಕ ಶೀಟ್ ಗಳ ಮಧ್ಯೆ ಹೋಲಿಕೆ
ಶಾಖನಿರೋಧಕ ಶೀಟ್ ಗಳು ಮಧ್ಯೆ ಗಾಳಿಯ ಪದರಗಳನ್ನು ಹೊಂದಿದ್ದು, ಶಾಖವು ಒಂದು ಪದರದಿಂದ ಇನ್ನೊಂದು ಪದರಕ್ಕೆ ಹರಡುವುದನ್ನು ನಿಧಾನಗೊಳಿಸುತ್ತದೆ. ಬಿಳೀ ಬಣ್ಣವು ಶಾಖವನ್ನು ಬರೀ 50% ರಿಂದ 60% ಮಾತ್ರ ತಡೆದರೆ, ಶಾಖ ನಿರೋಧಕ ಶೀಟ್ ಗಳು ಶಾಖವನ್ನು 95% ರಿಂದ 97% ವರೆಗೂ ತಡೆಯುತ್ತವೆ. ಅಷ್ಟಕ್ಕೂ ಬಿಳೀ ಬಣ್ಣವು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಸುವ ಕೆಲಸ ಮಾತ್ರ ಮಾಡಿದರೆ, ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರಿಸುವ ವಿಷಯದಲ್ಲಿ ಎಳ್ಳಷ್ಟೂ ಪ್ರಯೋಜನಕಾರಿಯಾಗುವುದಿಲ್ಲ. ಮೇಲಾಗಿ, ತುಂಬ ಬೇಗ ತನ್ನ ಹೊಳಪನ್ನು ಕಳೆದುಕೊಳ್ಳುವ ಬಿಳೀ ಬಣ್ಣಕ್ಕೆ ಹೋಲಿಸಿದರೆ, ಶಾಖ ನಿರೋಧಕ ಶೀಟ್ ಗಳು ವರ್ಷಾನುಗಟ್ಟಲೇ ಯಾವುದೇ ನಿರ್ವಹಣೆಯ ಖರ್ಚಿಲ್ಲದೇ ಮನೆಯನ್ನು ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೂ ಇರಿಸಬಲ್ಲವು.
ದಕ್ಷತೆ ಮತ್ತು ನಿರ್ವಹಣೆ
ಮೊದಲೇ ತಿಳಿಸಿದಂತೆ ಬಿಳೀಬಣ್ಣವು, ಶಾಖವನ್ನು ಬರೀ ಐವತ್ತರಿಂದ ಅರವತ್ತು ಪರ್ಸೆಂಟ್ ಮಾತ್ರ ತಡೆಯಬಲ್ಲದಾಗಿದೆ. ಇದರ ಜೊತೆಗೆ, ಗಾಳಿ, ಮಳೆ ಧೂಳಿಗೆ ಬಲುಬೇಗ ಸಾಮರ್ಥ್ಯ ಕಳೆದುಕೊಳ್ಳುವುದರಿಂದ ಪದೇ ಪದೇ ಸ್ವಚ್ಛಗೊಳಿಸಲೇಬೇಕಾಗುತ್ತದೆ. ನೀರು ಕಡಿಮೆಯಿರುವ ಪ್ರದೇಶದಲ್ಲಿ ಮೇಲ್ಛಾವಣಿಯನ್ನು ತೊಳೆಯುವುದು ಕೂಡ ಸಮಸ್ಯೆಯೇ. ಅಷ್ಟು ಜಾಗರೂಕವಾಗಿ ನೋಡಿಕೊಂಡ ಮೇಲೂ ಬಣ್ಣವು ಕೆಲವೇ ವರ್ಷಗಳಲ್ಲಿ ಹೊಳಪನ್ನು ಕಳೆದುಕೊಂಡು, ಹೊಸದಾಗಿ ಪೇಂಟ್ ಮಾಡಲು ಮತ್ತೆ ಮತ್ತೆ ಖರ್ಚು ಮಾಡಬೇಕಾಗುತ್ತದೆ. ಇವೆಲ್ಲ ಸೇರಿ ಕಾಲಕ್ರಮೇಣ ಬಿಳೀಬಣ್ಣವು ಒಂದು ತಲೆನೋವಾಗಿ ಮಾರ್ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪರಿಸರದ ಮೇಲೆ ಪರಿಣಾಮ
ನೀರಿಗಾಗಿ ಹಾಹಾಕಾರವೇಳುತ್ತಿರುವ ಇಂದಿನ ದಿನಮಾನಗಳಲ್ಲಿ, ಅತೀ ಅವಶ್ಯಕವಾದ ದೈನಂದಿನ ಕ್ರಿಯೆಗಳಿಗೆ ನೀರು ಒದಗಿಸಲಿಕ್ಕೇ ನಾವು ಒದ್ದಾಡುವ ಪರಿಸ್ಥಿತಿಯಿದೆ. ಅಂಥದ್ದರಲ್ಲಿ ಪದೇ ಪದೇ ಧೂಳು, ಕೆಸರು ಅಂಟಿಸಿಕೊಂಡು ಬಿಸಿ ತಡೆಯಲು ಪ್ರಯೋಜನವಿಲ್ಲದಂತಾಗುವ ಮೇಲ್ಛಾವಣಿಯನ್ನೂ ತೊಳೆಯುವ ಪರಿಸ್ಥಿತಿ ಬಂದರೆ, ನೀರನ್ನು ಎಲ್ಲಿಂದ ತರುವುದು? ಮೇಲಾಗಿ, ಅಷ್ಟು ನೀರು ವ್ಯರ್ಥವಾದರೆ ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳಿಗೆ ಯಾರು ಹೊಣೆ? ಅದೂ ಅಲ್ಲದೇ, ಬಿಳೀ ಬಣ್ಣ ತಯಾರಿಸುವಾಗ ಪರಿಸರಕ್ಕಾಗುವ ಅಡ್ಡಪರಿಣಾಮಗಳ ಲೆಕ್ಕ ಬೇರೆ. ಇವೆಲ್ಲವನ್ನೂ ಯೋಚಿಸಿದರೆ, ಬಿಳೀ ಬಣ್ಣಕ್ಕೆ ಪರ್ಯಾಯವಾಗಿ, ಇದಕ್ಕಿಂತ ಪರಿಣಾಮಕಾರಿ ಮತ್ತು ಬಾಳಿಕೆ ಬರುವಂಥ ಬೇರೆ ಪದ್ಧತಿಗಳ ಕಡೆ ಸಹಜವಾಗಿಯೇ ಗಮನ ಹೊರಳುತ್ತದೆ. ಶಾಖ ನಿರೋಧಕ ಶೀಟ್ ಗಳನ್ನು ಸಹಜವಾಗಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದ ತಯಾರಿಸಲಾಗಿದ್ದು, ಇವು ಪರಿಸರ ಸ್ನೇಹಿಯಾಗಿವೆ.
ಶಾಖ ನಿರೋಧಕ ಶೀಟ್ ಗಳ ಅನುಕೂಲಗಳು
ಇಂದು ಮಾರುಕಟ್ಟೆಯಲ್ಲಿ ಸಿಗುವ ಪಾರಂಪರಿಕ ಶಾಖ ನಿರೋಧಕ ಶೀಟ್ ಗಳಿಗೆ ಹೋಲಿಸಿದರೆ, ಬಾಳಿಕೆ, ನಿರ್ವಹಣೆ ಮತ್ತು ಪರಿಸರಕ್ಕೆ ಹಾನಿಯನ್ನು ಗಮನಕ್ಕೆ ತೆಗೆದುಕೊಂಡಾಗ ಬಿಳೀ ಬಣ್ಣ ಬಳಿಯುವ ಪದ್ಧತಿಯ ನ್ಯೂನತೆಗಳು ಕಣ್ಣಿಗೆ ರಾಚುತ್ತವೆ. ಶಾಖ ನಿರೋಧಕ ಶೀಟ್ ಗಳು ವರ್ಷಾನುಗಟ್ಟಲೇ ತಲೆನೋವಿಲ್ಲದೇ ಅತ್ಯದ್ಭುತ ರೀತಿಯಲ್ಲಿ ಮನೆಯನ್ನು ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೂ ಇರಿಸುವ ಸುಖವನ್ನು ಕಣ್ಣಾರೆ ಕಾಣುವಾಗ, ಮನೆಯನ್ನು ಬರೀ ಅರ್ಧಂಬರ್ಧ ತಂಪಾಗಿಸುವ ಬಿಳೀಬಣ್ಣ ಸ್ಪರ್ಧೆಯಲ್ಲಿ ಸೋಲುತ್ತದೆ. ಮೇಲೆ ಹೇಳಿದಂತೆ ಚಳಿಗಾಲದಲ್ಲಿ ಬಿಳೀ ಬಣ್ಣವು ಪ್ರಯೋಜನಕ್ಕೆ ಬರುವುದಿಲ್ಲ. ಮೇಲಾಗಿ ಪರಿಸರಕ್ಕೆ ಹಾನಿಯಾಗದೇ ತಯಾರಾದ ಶಾಖ ನಿರೋಧಕ ಶೀಟ್ ಗಳು, ಪರಿಸರಸ್ನೇಹದ ವಿಷಯದಲ್ಲೂ ಬಿಳೀಬಣ್ಣಕ್ಕಿಂತ ಮೇಲುಗೈ ಸಾಧಿಸುತ್ತವೆ.
ಸಾರಾಂಶ
ಒಂದು ಕಡೆ ಪರಿಸರ ಸಮತೋಲನ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯತೆಯ ಜೊತೆ ಜೊತೆಗೇ, ಜನರ ಆರಾಮವೂ ಅಷ್ಟೇ ಮುಖ್ಯವಾಗಿರುವಾಗ, ಇವೆರಡರಲ್ಲೂ ಸೋಲುವ ಬಿಳೀಬಣ್ಣವು ಯಾವುದೇ ರೀತಿಯಲ್ಲೂ ಮನೆಯನ್ನು ತಂಪಾಗಿಸುವ ಇಲ್ಲವೇ ಬೆಚ್ಚಗಿರಿಸುವ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗದು. ಇದರ ಬದಲು, ಹಲವಾರು ಕಡೆಗಳಲ್ಲಿ ಎಷ್ಟೋ ವರ್ಷಗಳಿಂದ ವಿಶ್ವಾಸಾರ್ಹತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಶಾಖನಿರೋಧಕ ಶೀಟ್ ಗಳಂಥ ಪರ್ಯಾಯ ವ್ಯವಸ್ಥೆಯ ಮೇಲೆ ಹಣ ಹೂಡುವುದೇ ಸರಿಯಾದ ನಿರ್ಧಾರವಾಗಿದೆ.
ಕನ್ನಡದಲ್ಲಿ ಅನುವಾದಿಸಿದವರು Manjunath Bhat