ನಿಮ್ಮ ಮನೆಯ ಮೇಲ್ಛಾವಣಿಯುನ್ನು ಬೇಸಿಗೆಯಲ್ಲಿ ತಂಪಾಗಿರಿಸುವುದು ಹೇಗೆ? How to keep Your Home cool in Summer ?

ಬಿಸಿಲಲ್ಲಿ ತಣ್ಣಗೆ, ಚಳಿಯಲ್ಲಿ ಬೆಚ್ಚಗೆ ಇಡು ನೀ… ರಾಘವೇಂದ್ರಾ!

ಮನೆಯೆನ್ನುವುದು ಬರೀ ಕಟ್ಟಡವಲ್ಲ. ಅದು ಹೊರಜಗತ್ತಿನ ತಾಪ, ಗಲಾಟೆಗಳಿಂದ ನಿಮ್ಮನ್ನು ರಕ್ಷಿಸಿ, ನೆಮ್ಮದಿಯಿಂದಿರಿಸುವ ತಾಣವೂ ಹೌದು. ಹಾಗಂತ ಈ ಸುಖ, ನೆಮ್ಮದಿಕ್ಕೋಸ್ಕರ ಮನೆಗೆ ನೀವು ಬಳಸುವ ವಸ್ತುಗಳುದಕ್ಷತೆಯಲ್ಲಾಗಲೀ, ಆರಾಮ ನೀಡುವ ವಿಷಯದಲ್ಲಾಗಲೀ ಯಾವುದೇ ರಾಜಿಯಾಗುವಂತಿರಬಾರದು. ಉದಾಹರಣೆಗೆ,ಹೆಚ್ಚಿನವರು ಬಳಸುವ ಶಿಂಗಲ್ ಶೀಟ್ (shingle sheet) ಹಾಗು ಆರ್ಸಿಸಿ(Rcc) ಮೇಲ್ಛಾವಣಿಯು ಸ್ಪಂಜಿನಂತೆ ಕೆಲಸ ಮಾಡುತ್ತದೆ. ಸೂರ್ಯನಶಾಖವನ್ನೆಲ್ಲ ಹೀರಿಕೊಳ್ಳುವುದರಿಂದ, ಶಿಂಗಲ್ ಹಾಗು ಆರ್ಸಿಸಿ(Rcc) ಮೇಲ್ಛಾವಣಿ ಇರುವ ಮನೆಯು ಒಲೆಯಂತೆ ಭಾಸವಾಗುತ್ತದೆ.ಸಾಲದೆಂಬಂತೆ, ಈ ಹೀಟಿನಿಂದ ಪಾರಾಗಲು ಏಸಿ ಅಥವಾ ಫ್ಯಾನ್ ಬಳಸುವುದರಿಂದ, ನಿಮ್ಮ ಕರೆಂಟ್ ಬಿಲ್ ಕೂಡಹೆಚ್ಚಾಗುತ್ತದೆ.

ಶೀತಲ ಮೇಲ್ಛಾವಣಿ

ಶೀತಲ ಇಲ್ಲವೇ ತಂಪಾದ ಮೇಲ್ಛಾವಣಿಯನ್ನು ನಿರ್ಮಿಸುವಾಗ, ಬೆಳಕನ್ನು ಪ್ರತಿಫಲಿಸುವ ಹಾಗೂ ಶಾಖವನ್ನು ತಡೆಯುವಎರಡು  ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಇದರಿಂದ ಒಂದು ಸಮಗ್ರ ಪರಿಹಾರ 
ಸಿಕ್ಕಂತಾಗುತ್ತದೆ. ಶೀತಲಛಾವಣಿಯು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ, ಮನೆಗೆ ಬರಬಹುದಾದ ಅಧಿಕ ಶಾಖವನ್ನು ತಡೆಗಟ್ಟುತ್ತದೆ. ಬರೀ ಇದೊಂದರಿಂದಲೇ ಮನೆಯಲ್ಲಿ ಏರ್ ಕಂಡೀಶನ್ ಗಾಗಿ ಖರ್ಚಾಗುವ ಕರೆಂಟ್
 ಉಳಿತಾಯವಾಗುತ್ತದೆ. 

ಬರೀ ಇಷ್ಟೇ ಅಲ್ಲ. ಮೇಲ್ಛಾವಣಿಯ ಜೊತೆ ಬಳಸಲ್ಪಡುವ ಶಾಖ ನಿರೋಧಕ ಶೀಟ್ ಗಳಿಂದಾಗಿ ಹೊರಗಿನಿಂದ ಶಾಖಮನೆಯ ಒಳಭಾಗಕ್ಕೆ ಪ್ರವಹಿಸುವುದನ್ನೂ ತಡೆಯಬಹುದು. ಇದರಿಂದಾಗಿ, ಶೀತಲ ಮೇಲ್ಛಾವಣಿಯನ್ನು ದಾಟಿ ಬಂದಸೂರ್ಯಕಿರಣದ ಶಾಖಕ್ಕೆ ತಡೆಗೋಡೆಯಂತೆ ನಿಲ್ಲುವ ನಿರೋಧಕ ಶೀಟ್ ಗಳು, ಮನೆಯ ಒಳಗಿನ ಭಾಗವುಬಿಸಿಯಾಗದಂತೆ ತಡೆಯುತ್ತವೆ. ಬೆಳಕಿನ ಪ್ರತಿಫಲನ ಮತ್ತು ಶಾಖ ನಿರೋಧಕ, ಈ ಎರಡೂ ಪ್ರಬಲ ಗುಣಗಳನ್ನುಬಳಸುವ ತಂತ್ರಜ್ಞಾನದಿಂದಾಗಿ ಮೇಲ್ಛಾವಣಿಯು ಮನೆಯನ್ನು ತಂಪಾಗಿಸುವುದರ ಜೊತೆ, ಕರೆಂಟ್ ಬಿಲ್ ಕೂಡಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ. ಇನ್ನೂ ಒಂದು ಪ್ರಯೋಜನವೆಂದರೆ, ಈ ರೀತಿಯ ಶೀಟ್ ಗಳನ್ನುಮೇಲ್ಛಾವಣಿಯಲ್ಲಿ ಬಳಸುವುದರಿಂದ, ಬೇಸಿಗೆಯಲ್ಲಿ ಮನೆ ತಂಪಾಗಿದ್ದರೆ, ಚಳಿಗಾಲದಲ್ಲಿ ಮನೆ ಬೆಚ್ಚಗಿರುತ್ತದೆ. ಹೀಗಾಗಿವರ್ಷದ ಎಲ್ಲ ಕಾಲದಲ್ಲಿಯೂ ಕಂಫರ್ಟ್ ಒದಗಿಸುವುದರ ಜೊತೆ, ವಿದ್ಯುತ್ ಖರ್ಚು ಕೂಡ ಕಡಿಮೆಯಾಗುತ್ತದೆ

ಮೇಲ್ಛಾವಣಿಗೆ ಯಾವ ವಸ್ತು ಉತ್ತಮ?

ರಾಕ್ ವೂಲ್ (Rockwool) ಅನ್ನು, ಮಿನರಲ್ ವೂಲ್ (Mineral wool) ಅಥವಾ ಸ್ಟೋನ್ ವೂಲ್ (Stone wool) ಎಂದೂ ಕರೆಯಲಾಗುತ್ತದೆ. ಇದು ಶೀತಲ ಮೇಲ್ಛಾವಣಿಯನ್ನು ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದಕ್ಕಿರುವ ಅಪರೂಪದ ಗುಣಗಳಿಂದಾಗಿ, ಹಲವು ಸಮಸ್ಯೆಗಳಿಗೆ ಒಟ್ಟಿಗೇ ಪರಿಹಾರ
 ದೊರಕಿಸಬಹುದಾಗಿದೆ.

ಮೊದಲನೇಯದಾಗಿ, ರಾಕ್ ವೂಲ್ ಒಂದು ಅಸಾಧಾರಣ ಶಾಖ ನಿರೋಧಕ. ಅರ್ಥಾತ್ ಇದು, ಹೊರಗಿನ ಶಾಖಮನೆಯೊಳಗೆ ನುಗ್ಗದಂತೆ ಸಮರ್ಥವಾಗಿ ತಡೆಯುತ್ತದೆ. ಮೇಲ್ಛಾವಣಿಯ ಕೆಳಗೆ ಅಳವಡಿಸಲ್ಪಡುವ ರಾಕ್ ವೂಲ್ ಶೀಟ್ಗಳು, ಮನೆಯ ಹೊರಗಿನ ಮತ್ತು ಒಳಗಿನ ವಾತಾವರಣಗಳ ಮಧ್ಯೆ ಒಂದು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಬೇಸಿಗೆಯಲ್ಲಿ ಹೊರಗಿನ ಶಾಖ ಒಳಗೆ ಬರದಂತೆಯೂ, ಚಳಿಗಾಲದಲ್ಲಿ ಒಳಗಿನ ಶಾಖ ಹೊರಗೆತಪ್ಪಿಸಿಕೊಳ್ಳದಂತೆಯೂ ತಡೆಯಬಹುದು. ಹೀಗಾಗಿ ಮನೆಯಲ್ಲಿ ವರ್ಷವಿಡೀ ಆರಾಮದಾಯಕ ತಾಪಮಾನ ಉಳಿದು, ಮನೆಯನ್ನು ವಿಪರೀತ ತಂಪಾಗಿಸಲು ಅಥವಾ ವಿಪರೀತ ಬಿಸಿಯಾಗಿಸಲು ಕರೆಂಟ್ ಖರ್ಚು ಮಾಡುವ ಪ್ರಮೇಯಬರಲಾರದು.

Grid ceiling + thermal insulation

ಎರಡನೇಯದಾಗಿ, ರಾಕ್ ವೂಲ್ ಶಬ್ದವನ್ನು ಬಹುಮಟ್ಟಿಗೆ ತಡೆಯುತ್ತದೆ. ಇದರಲ್ಲಿರುವ ದಟ್ಟವಾದ ರಚನೆಯುಹೊರಗಿನ ಮತ್ತು ಒಳಗಿನ ವಾತಾವರಣದ ಮಧ್ಯೆ ಶಬ್ದ ತರಂಗಳು ಹರಿಯದಂತೆ ನೋಡಿಕೊಳ್ಳುತ್ತದೆ. ಹೀಗಾಗಿಮನೆಯಲ್ಲಿದ್ದಾಗ ಹೊರಗಿನ ಗಲಾಟೆ ಕೇಳಿಸದೇ, ಮನೆಯ ಒಳಗಿರುವವರು ನೆಮ್ಮದಿಯಾಗಿರಬಹುದು.

ಕೊನೆಯದಾಗಿ, ರಾಕ್ ವೂಲ್ ಬೆಂಕಿ ನಿರೋಧಕವೂ ಹೌದು. ಬೆಂಕಿ ನಿರೋಧಕ ನೈಸರ್ಗಿಕ ಸ್ಟೋನ್ ಫೈಬರ್ ನಿಂದಮಾಡಲ್ಪಟ್ಟಿರುವುದರಿಂದ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೇ ಬೆಂಕಿ ನಿರೋಧಕ ವಸ್ತುಗಳಿಗಿಂತ ರಾಕ್ ವೂಲ್ಅತ್ಯುತ್ತಮವೆಂಬುದು ತಜ್ಞರ ಅಭಿಪ್ರಾಯ. ಮನೆಗೆ ಬೆಂಕಿಯಿಂದ ಆಪತ್ತು ಉಂಟಾದ ಸಮಯದಲ್ಲಿ, ಬೆಂಕಿ ಬೇಗನೇಹರಡದೇ ಇರಲು ಮತ್ತು ಕಟ್ಟಡಕ್ಕೆ ಹಾನಿಯಾಗದಂತೆ ತಡೆಯಲು ಈ ಶೀಟ್ ಗಳು ಸಹಾಯ ಮಾಡುತ್ತದೆ. 
ಇದರಿಂದಾಗಿಬೆಂಕಿ ನಂದಿಸುವ ಮತ್ತು ಜನರ ಸುರಕ್ಷಿತ ತೆರವಿನ ಕಾರ್ಯಕ್ಕೆ ಹೆಚ್ಚಿನ ಸಮಯವೂ ಸಿಗುತ್ತದೆ. 

ಇವೆಲ್ಲ ಸಂಗತಿಗಳನ್ನು ಗಮನಿಸಿದಾಗ, ಶೀತಲ ಮೇಲ್ಛಾವಣಿಗೆ ರಾಕ್ ವೂಲ್ ಒಂದು ಸಮಂಜಸ ಆಯ್ಕೆಯಾಗಿಹೊರಹೊಮ್ಮುತ್ತದೆ. ಅದರಲ್ಲೂ ಇತ್ತೀಚಿಗೆ ನಗರಗಳಲ್ಲಿ ಜನಪ್ರಿಯವಾಗಿರುವ ಡ್ರಾಪ್ ಸೀಲಿಂಗ್ ಗಳ ಜೊತೆ ಇವನ್ನುಬಳಸಿದಾಗ, ಶಾಖ ಮತ್ತು ಶಬ್ದಮಾಲಿನ್ಯವನ್ನು ಸಮರ್ಥವಾಗಿ ತಡೆಯಬಹುದು. ಇದರಿಂದಾಗಿ ಮನೆ, ಆಫೀಸು ಯಾವುದೇಆಗಿರಲಿ, ದೈನಂದಿನ ಬದುಕು ಆರಾಮದಾಯಕವಾಗಿರುತ್ತದೆ ಹಾಗೂ ಅಷ್ಟೇ ವಿದ್ಯುತ್ ವೆಚ್ಚವೂ ಉಳಿತಾಯವಾಗುತ್ತದೆ.

ಇದೆಲ್ಲದರ ಅರ್ಥ ರಾಕ್ ವೂಲ್ ಬರೀ ಮೇಲ್ಛಾವಣಿಗೆ ಮಾತ್ರ ಬಳಕೆಯಾಗುತ್ತದೆ ಎಂದಲ್ಲ. ಇದನ್ನು ಗೋಡೆಗಳಿಗೂಬಳಸಬಹುದಾಗಿದೆ. ಇದರ ಅಸಾಧಾರಣ ಶಾಖ ನಿರೋಧಕ ಮತ್ತು ಬೆಂಕಿ ನಿರೋಧಕ ಗುಣದಿಂದಾಗಿ ಇಡೀ ಕಟ್ಟಡಕ್ಕೆಸುರಕ್ಷಾ ಕವಚವನ್ನು ನಿರ್ಮಿಸಬಹುದು. ಗೋಡೆಯ ಮೂಲಕವೂ ತಾಪಮಾನವು ಪ್ರವಹಿಸುತ್ತದೆ ಮತ್ತು ಇವನ್ನೂ ರಾಕ್ವೂಲ್ ಶೀಟ್ ಗಳಿಂದ ತಡೆಯಬಹುದು ಎನ್ನುವುದನ್ನು ಗಮನಿಸಿದಾಗ, ಎಷ್ಟು ವಿದ್ಯುತ್ಉಳಿತಾಯವಾಗುತ್ತದೆಯೆಂಬುದು ಅರ್ಥವಾಗುತ್ತದೆ. ಇದು ಬರೀ ಬೇಸಿಗೆಯಲ್ಲಿ ಮಾತ್ರ ಆಗಿರದೇ ವರ್ಷವಿಡೀಉಂಟಾಗುವ ತಾಪಮಾನ ವೈರುಧ್ಯವನ್ನು ಈ ರೀತಿ ತಡೆದುಬಿಡುತ್ತದೆ!

ಕೂಲಿಂಗ್ ಶೀಟ್ ಗಳು

ಮಾರುಕಟ್ಟೆಯಲ್ಲಿ ಇಂದು ಹಲವು ರೀತಿಯ ವಿಕಿರಣ ತಡೆಗೋಡೆಗಳು ಲಭ್ಯವಿದ್ದು, ಪ್ರತಿಯೊಂದಕ್ಕೂ ಅದರದ್ದೇ ಆದ ಸಾಧಕ ಬಾಧಕಗಳಿವೆ. ಅವುಗಳಲ್ಲಿ XLPE (Cross-Linked Polyethylene foam), ಸಾಮಾನ್ಯ ಅಲ್ಯೂಮಿನಿಯಮ್ ಹಾಳೆಗಳು, ಮತ್ತು EPE foam (Expanded polyethylene foam) ಗಳನ್ನು ಇವುಗಳ ಶಾಖ ನಿರೋಧಕ ಮತ್ತು ಪ್ರತಿಫಲನದ ಗುಣಗಳಿಂದಾಗಿ ಹೆಚ್ಚಾಗಿ ಬಳಸುತ್ತಾರೆ.

XLPE ಯು ಅದರ ಬಾಳಿಕೆ ಮತ್ತು ತೇವಾಂಶ ನಿರೋಧ ಗುಣಕ್ಕೆ ಹೆಸರಾಗಿದ್ದು, ಅದನ್ನು ಕ್ಲಿಷ್ಟ ಸಂದರ್ಭಗಳಲ್ಲಿಯೂ ಬಳಸಬಹುದಾಗಿದೆ. ಇನ್ನು ಅಲ್ಯೂಮಿನಿಯಮ್ ಹಾಳೆಯ ಶ್ರೇಷ್ಠ ಪ್ರತಿಫಲನಕಾರಿ ಗುಣದಿಂದಾಗಿ, ಅದನ್ನು ಏಕಾಂಗಿಯಾಗಿಯೂ, ಇಲ್ಲವೇ ಇತರೇ ಶಾಖ ನಿರೋಧಕ ವಸ್ತುಗಳ ಜೊತೆಯಾಗಿಯೂ ಬಳಸಬಹುದು. EPE foam ಶಾಖವನ್ನು ತಡೆಯುವುದಲ್ಲದೇ, ಅದರ ಮೆತ್ತೆಯಂಥ ಗುಣದಿಂದಾಗಿ, ಶಾಖ ನಿರೋಧದ ಹೊರತಾಗಿ ಇತರ ಅಗತ್ಯಗಳಿಗೂಬಳಸಬಹುದಾಗಿದೆ.

ಶಬ್ದ ಮಾಲಿನ್ಯ ಮತ್ತು ಬೆಂಕಿಯನ್ನು ತಡೆಯುವುದರಲ್ಲಿ ರಾಕ್ ವೂಲ್ ನಷ್ಟು ಪ್ರಭಾವಶಾಲಿಯಲ್ಲದಿದ್ದರೂ, reflective bubble sheeting ಶಾಖವನ್ನು ತಡೆಯಲು ಒಂದು ಸರಳ ಮತ್ತು ಮಿತವ್ಯಯದ ಪರಿಹಾರವಾಗಿದೆ. reflective bubble ಶೀಟ್ ಗಳು ಶಾಖವನ್ನು ಸಮರ್ಪಕವಾಗಿ ತಡೆಯುವುದಲ್ಲದೇ, ನಿರ್ಮಾಣದ ವೆಚ್ಚವನ್ನೂ ಕಡಿಮೆ ಮಾಡುತ್ತವೆ. ಬೆಳಕನ್ನು ಪ್ರತಿಫಲಿಸಲು ಸಮರ್ಥ ತಂತ್ರಜ್ಞಾನವನ್ನು ಬಳಸಿಕೊಂಡು, ಮನೆಯೊಳಗೆ ಅತೀಯಾದ ಕೂಲಿಂಗ್ ಇಲ್ಲವೇ ಹೀಟಿಂಗ್ ಖರ್ಚನ್ನು ಉಳಿತಾಯ ಮಾಡುತ್ತವೆ.

ಅದು XLPE ಆಗಿರಲಿ, ಇಲ್ಲವೇ ಅಲ್ಯೂಮಿನಿಯಮ್ ಹಾಳೆಗಳಾಗಿರಲಿ, ಅಥವಾ EPE foam ಆಗಿರಲಿ, ಇಲ್ಲವೇ ಇನ್ಯಾವುದೇ ವಸ್ತುವಾಗಿರಲಿ, ಎಷ್ಟು ಸಮರ್ಥವಾಗಿ ವಿಕಿರಣವನ್ನು ತಡೆಯುತ್ತದೆ ಎನ್ನುವುದು ಸುತ್ತಮುತ್ತಲಿನ ಹವಾಮಾನ,ಆಯಾ ಕಟ್ಟಡ ರಚನೆ ಮತ್ತು ಅಲ್ಲಿಯ  ನಿರ್ದಿಷ್ಟ ಅಗತ್ಯಗಳಿಂದ ನಿರ್ಧಾರವಾಗುತ್ತದೆ. ಆದರೆ ಈ ಎಲ್ಲ ವಸ್ತುಗಳ ಉದ್ದೇಶ ಮಾತ್ರ ಕಟ್ಟಡಗಳಲ್ಲಿ ಇಂಧನ ದಕ್ಷತೆ ಹೆಚ್ಚಿಸುವುದರ ಜೊತೆ, ಒಳಗಿನ ವಾತಾವರಣ ಆರಾಮದಾಯಕವಾಗಿರುವಂತೆ ನೋಡಿಕೊಳ್ಳುವುದಾಗಿದ್ದರಿಂದ, ಮೇಲ್ಛಾವಣಿಯ ನಿರ್ಮಾಣಕ್ಕೆ ಈ ವಸ್ತುಗಳನ್ನೇ ಆರಿಸಲಾಗುತ್ತದೆ.

ಉದಾಹರಣೆಗೆ ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ reflective bubble sheet ಹೆಚ್ಚು ಉಪಯೋಗಕಾರಿಯಾಗಿದೆ. ಇತರೇ ನಿರೋಧಕ ವಸ್ತುಗಳೊಂದಿಗೆ ಇದನ್ನು ಬಳಸಿದಾಗ reflective bubble sheeting ಕಡಿಮೆ ಖರ್ಚಿನಲ್ಲಿ ಆರಾಮವನ್ನು ಒದಗಿಸಿ, ವಿದ್ಯುತ್ ಉಳಿತಾಯವನ್ನು ಹೆಚ್ಚಿಸುತ್ತವೆ.

ಸಾರಾಂಶ

ಇವೆಲ್ಲವನ್ನೂ ಗಮನಿಸಿ ಹೇಳುವುದಾದರೆ, ಶೀತಲ ಮೇಲ್ಛಾವಣಿಯ ವ್ಯವಸ್ಥೆಯು (Cool roof systems) ಮನೆಯೊಡಯನಿಗೆ ವಿದ್ಯುತ್ ಖರ್ಚನ್ನು ಉಳಿಸುವುದರ ಜೊತೆಗೆ ವರ್ಷವಿಡೀ ಆರಾಮವನ್ನು ಒದಗಿಸುತ್ತದೆ. ಪ್ರತಿಫಲನ(Reflective) ಮತ್ತು ನಿರೋಧಕ ವಸ್ತುಗಳನ್ನು ಒಟ್ಟಾಗಿ ಬಳಸುವುದರಿಂದ ಮನೆಯು ಬಿಸಿಯಾಗುವುದನ್ನು ತಡೆಯುವುದಲ್ಲದೇ ಕಿಸೆಗೂ ಹೊರೆ ತಪ್ಪಿಸಬಹುದು. ರಾಕ್ ವೂಲ್ ನಂಥ ವಸ್ತುಗಳು ಬಿಸಿಯನ್ನು ತಡೆಯುವುದರ ಜೊತೆಗೆ, ಬೆಂಕಿ ನಿರೋಧಕ ಮತ್ತು ಶಬ್ಧ ನಿರೋಧಕವಾಗಿಯೂ ಕೆಲಸ ಮಾಡುತ್ತವೆ. ಅಥವ reflective bubble sheeting ಕಟ್ಟಡದ ಮೇಲೆ ಬೀಳುವ ಬಿಸಿಲನ್ನು ಪ್ರತಿಫಲಿಸುವುದರಿಂದ, ಇದನ್ನು ಮಿತವ್ಯಯದ ದಾರಿಯಾಗಿ ಆರಿಸಿಕೊಳ್ಳಬಹುದು. ಉನ್ನತ ಶಾಖ ನಿರೋಧಕ ವ್ಯವಸ್ಥೆಗಾಗಿ ರಾಕ್ ವೂಲ್ ಆಗಿರಲಿ ಅಥವಾ ಸರಳ ಪರಿಹಾರವಾಗಿ reflective bubble sheeting ಆಗಿರಲಿ, ನಮ್ಮ ಆಯ್ಕೆಯು, ಆಯಾ ಜಾಗದ ವಾತಾವರಣ, ಕಟ್ಟಡ ರಚನೆ ಮತ್ತು ಇತರೇ ಅವಶ್ಯಕತೆಗಳ ಮೇಲೆ ಅವಲಂಬಿತವಾಗಿದೆ. ಒಟ್ಟಿನಲ್ಲಿ ಸೂಕ್ತ ನಿರೋಧಕ ವಸ್ತುಗಳಿಂದ ನಿರ್ಮಿತವಾದ ಶೀತಲಮೇಲ್ಛಾವಣಿಯು (Cool roofing system) ಕಟ್ಟಡ ಆಯುಷ್ಯ ಹೆಚ್ಚಿಸುವುದರ ಜೊತೆಗೆ, ಹಣ ಉಳಿತಾಯ ಮತ್ತು ಪರಿಸರ ಸ್ನೇಹಿ ಪರಿಹಾರವಾಗಿದೆ.

ಸಾಮಾನ್ಯವಾಗಿ ಉಂಟಾಗುವ ಸಂದೇಹಗಳು

ಮೊದಲೇ ನಿರ್ಮಾಣವಾದ ಕಟ್ಟಡಕ್ಕೆ ಈ ವಿಧಾನಗಳನ್ನು ಬಳಸಬಹುದೇ?

ಖಂಡಿತವಾಗಿ ಬಳಸಬಹುದು. ಮೊದಲೇ ನಿರ್ಮಾಣವಾಗಿರುವ ಕಟ್ಟಡಗಳಿಗೂ ಹಲವು ಕಡೆಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಲಾಗಿದೆ. ನಿಮ್ಮ ಮನೆ ಅಥವಾ ಕಟ್ಟಡಕ್ಕೆ ಯಾವ ರೀತಿಯ ಪರಿಹಾರ ಸೂಕ್ತ ಎನ್ನುವುದನ್ನು ತಿಳಿಯಲು ಸಂಬಂಧಪಟ್ಟ ಪ್ರೊಫೆಷನಲ್ ಗಳನ್ನು ಸಂಪರ್ಕಿಸಿ.

ಈ ಕೂಲ್ ಶೀಟ್ ಗಳು ಎಷ್ಟು ಸಮಯ ಬಾಳುತ್ತವೆ?

ಕಟ್ಟಡದಲ್ಲಿ ಬಳಸಲ್ಪಟ್ಟ ನಿರೋಧಕ ವಸ್ತುಗಳ ಗುಣಮಟ್ಟ, ನಿರ್ಮಿಸಲು ಬಳಸಿದ ತಂತ್ರಜ್ಞಾನ  ಮತ್ತು ನಿರ್ಮಾಣದ ನಂತರ ಹೇಗೆ ನೋಡಿಕೊಳ್ಳಲಾಗುತ್ತದೆ ಎನ್ನುವುದರ ಮೇಲೆ, ಇದು ಎಷ್ಟು ವರ್ಷ ಬಾಳಿಕೆ ಬರುತ್ತದೆ ಎನ್ನುವುದು ನಿರ್ಧಾರವಾಗುತ್ತದೆ. ಸರಿಯಾಗಿ ನೋಡಿಕೊಂಡಲ್ಲಿ, ತಂಪು ಮೇಲ್ಛಾವಣಿಗಳು ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಬಾಳಿಕೆ ಬರಬಲ್ಲವು..

ಅನುವಾದಿಸಿದವರು : ಮಂಜುನಾಥ ಭಟ್

Leave a Comment

Shopping Cart